top of page
ಬಡ ಕುಟುಂಬದ ವಿದ್ಯಾರ್ಥಿನಿಯ  ವಿದ್ಯಾಭ್ಯಾಸಕ್ಕೆ ನೆರವಾದ ಪ್ರಯತ್ನ ತಂಡ
01:19

ಬಡ ಕುಟುಂಬದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವಾದ ಪ್ರಯತ್ನ ತಂಡ

ಬಡ ಕುಟುಂಬದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವಾದ ಪ್ರಯತ್ನ ತಂಡ ಈ ವಿದ್ಯಾರ್ಥಿನಿಯ ತಂದೆಯು ಹೊಲದಲ್ಲಿ ಕೆಲಸ ಮಾಡುತ್ತಿದ್ದು ತಾಯಿಯು ಬೇರೆಯವರ ಮನೆಯಲ್ಲಿ ಮನೆಗೆಲಸ ಮಾಡಿ ಇಬ್ಬರು ಕಷ್ಟಪಟ್ಟು ಮಗಳನ್ನು ಓದಿಸುತ್ತಿದ್ದರು. ಮಗಳು ಮೊದಲ ವರ್ಷ ಪಿ ಯು ಸಿ ಸೈನ್ಸ್ ಓದುತ್ತಿರುವ ಸಮಯದಲ್ಲಿ ಅಪೆಂಡಿಕ್ಸ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಮಧ್ಯದಲ್ಲೇ ಕಾಲೇಜು ಹೋಗಲು ಆಗದೆ ನೇರವಾಗಿ ಪರೀಕ್ಷೆ ಬರೆದು ಉತ್ತೀರ್ಣಳಾಗಿದ್ದಾಳೆ. ಆದರೆ ದುಡಿದು ತಿನ್ನುತ್ತಿರುವ ಈ ಕುಟುಂಬವು ಹಣದ ಕೊರತೆಯಿಂದಾಗಿ ಮಗಳ ದ್ವಿತೀಯ ವರ್ಷದ ಪಿ ಯು ಸಿ ಸೈನ್ಸ್ ಅಡ್ಮಿಶನ್ ಮಾಡಲು ಆಗದಿರುವಾಗ ತಂದೆ ತಾಯಿ ಜೊತೆಗೆ ವಿದ್ಯಾರ್ಥಿನಿಯು ಮಹೇಶ ಫೌಂಡೇಶನಗೆ ಭೇಟಿ ನೀಡಿ ಸಹಾಯ ಕೇಳಿದರು. ನಮ್ಮ ಪ್ರಯತ್ನ ತಂಡವು ಬೆಳಗಾವಿಯ ಸಿದ್ದರಾಮೇಶ್ವರ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಅಡ್ಮಿಷನನ್ನು ಮಾಡಿ ಅವಳ ವಿದ್ಯಾಭ್ಯಾಸ ಮುಂದುವರೆಸಲು ಸಹಾಯ ಮಾಡಿದೆ. 𝐏𝐫𝐚𝐲𝐚𝐭𝐧𝐚 𝐭𝐞𝐚𝐦 𝐬𝐮𝐩𝐩𝐨𝐫𝐭𝐬 𝐭𝐡𝐞 𝐞𝐝𝐮𝐜𝐚𝐭𝐢𝐨𝐧 𝐨𝐟 𝐩𝐨𝐨𝐫 𝐠𝐢𝐫𝐥. Prayatna team working for needy families for the past 2 years and supporting them to become self-sustained. Here is a girl from a poor family whose parents work hard to fulfill the needs of the family. While studying the 1st year of PUC Science the girl stopped going to college due to her appendix operation and directly faced her final exams and passed with good grades. Due to poor economic background, the family is unable to afford further educational expenses. The family visited Mahesh Foundation seeking help for the education of girl. Our Prayatna team helped to continue her education and admitted her to Siddarameshwar College Belagavi. #Prayatnawithmadhu #project16
ಪ್ರತಿಭಾವಂತ ವಿದ್ಯಾರ್ಥಿನಿಗೆ ದಾರಿದೀಪವಾದ ಪ್ರಯತ್ನ
02:12

ಪ್ರತಿಭಾವಂತ ವಿದ್ಯಾರ್ಥಿನಿಗೆ ದಾರಿದೀಪವಾದ ಪ್ರಯತ್ನ

ಬೆಳಗಾವಿಯ ಗೊಗಟೆ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ ವಿದ್ಯಾರ್ಥಿನಿ, ಲ್ಯಾಪ್‌ಟಾಪ್ ಪಡೆಯಲು ಮತ್ತು ಕಾಲೇಜು ಶುಲ್ಕಕ್ಕಾಗಿ ವಿದ್ಯಾರ್ಥಿನಿಗೆ ಬೆಂಬಲದ ಅಗತ್ಯವಿತ್ತು. ಕುಟುಂಬದ ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಅವರಿಗೆ ಅದನ್ನು ಭರಿಸಲು ಸಾಧ್ಯವಾಗಲಿಲ್ಲ. ಕಾಲೇಜಿನ ಕಂಪ್ಯೂಟರ್ ನಲ್ಲಿ ಅಭ್ಯಾಸ ಮಾಡುತ್ತಿದ್ದಳು. ಪ್ರಯತ್ನದ 14 ನೇ ಯೋಜನೆಯಡಿ, ನಾವು ಅವರಿಗೆ ಕಾಲೇಜು ಶುಲ್ಕವನ್ನು ಪಾವತಿಸಲು ಬೆಂಬಲ ನೀಡಿದ್ದೇವೆ ಮತ್ತು ಅವರ ಅಧ್ಯಯನಕ್ಕೆ ಸಹಾಯ ಮಾಡುವ ಲ್ಯಾಪ್‌ಟಾಪ್ ಅನ್ನು ಸಹ ಒದಗಿಸಿದ್ದೇವೆ. ಈ ಬೆಂಬಲಕ್ಕೆ ಅವರು ಈ ವಿಡಿಯೋ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. Here is a BCA student studying at Gogte College Belagavi. The student required support to get a laptop and for college fees. Due to the poor economical condition of the family, she was unable to afford it. She used to practice in the college computers. Under the 14th project of Prayatna, we have supported her to pay the college fees and also provided a laptop that helps in her studies. She expressed her gratitude for this support through this video. #Prayatna #14Project
ವಿಶೇಷ ಚೇತನ ಬಾಲಕಿಗೆ ಬೆಂಬಲ ನೀಡಿ ಅವಳ ಬಾಳಿಗೆ ಬೆಳಕಾದ ಪ್ರಯತ್ನ.
01:28

ವಿಶೇಷ ಚೇತನ ಬಾಲಕಿಗೆ ಬೆಂಬಲ ನೀಡಿ ಅವಳ ಬಾಳಿಗೆ ಬೆಳಕಾದ ಪ್ರಯತ್ನ.

ಸಾನ್ವಿ ಮಹಾವೀರ್ ಜಕ್ಕನವರ್ ಎಂಬ ದೈಹಿಕ ವಿಶೇಷ ಚೇತನ ಬಾಲಕಿ ಬೆಳಗಾವಿಯ ಸಮರ್ಥ ನಗರದ ನಿವಾಸಿ. ಬೆಳಗಾವಿಯ ಸಮರ್ಥ ನಗರದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ. ಹುಟ್ಟಿನಿಂದಲೇ ಪೋಲಿಯೋ ಪೀಡಿತಳಾಗಿದ್ದಾಳೆ. ಆ ಶಾಲೆಗೆ ಭೇಟಿ ನೀಡಿದಾಗ ಸಾನ್ವಿ ಬಗ್ಗೆ ತಿಳಿದು ಬಂದಿತು. ಪ್ರಯತ್ನದ 13 ನೇ ಯೋಜನೆಯಡಿ, ನಾವು ಶಾಲೆಯಿಂದ ಮನೆಗೆ ಪ್ರಯಾಣಿಸಲು ಸುಲಭವಾಗುವಂತೆ ಗಾಲಿಕುರ್ಚಿಯನ್ನು ಒದಗಿಸಿದ್ದೇವೆ. ಅಲ್ಲದೆ, ಸಾನ್ವಿಯ ಶೈಕ್ಷಣಿಕ ಜವಾಬ್ದಾರಿಯನ್ನು ನಾವು ತೆಗೆದುಕೊಂಡಿದ್ದೇವೆ. Sanvi Mahaveer Jakkanavar, a physically challenged girl is a resident of Samarth Nagar, Belagavi. She is studying in 3rd standard in Government School of Samarth Nagar, Belagavi. She has been affected by polio since birth. When we visited the school, we come to know about Sanvi. Under Prayatna's 13th project, we have provided a wheelchair that eases her traveling from school to home. Also, we have taken educational responsibility for Sanvi. #Prayatna #13Project . Follow us on our social media: Facebook: https://www.facebook.com/maheshfoundation Instagram: https://www.instagram.com/maheshfoundation/?utm_medium=copy_link Twitter: https://twitter.com/maheshfoundatio LinkedIn: https://www.linkedin.com/company/mahesh-foundation/ Donate to our cause: https://donate.maheshfoundation.org/
ಬಡವರ ಬಾಳಿಗೆ ವಿದ್ಯಾ ದೀಪವಾದ ಪ್ರಯತ್ನ
01:06

ಬಡವರ ಬಾಳಿಗೆ ವಿದ್ಯಾ ದೀಪವಾದ ಪ್ರಯತ್ನ

ಬಡವರ ಬಾಳಿಗೆ ವಿದ್ಯಾ ದೀಪವಾದ ಪ್ರಯತ್ನ ಬಡ ಕುಟುಂಬದಲ್ಲಿ ಹುಟ್ಟಿದ ಈ ವಿದ್ಯಾರ್ಥಿಯ ತಂದೆಯು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಶ್ರಮದ ಕೆಲಸ ಮಾಡಲಾಗದ ಪರಿಸ್ಥಿತಿ ಇದ್ದು ಮಗನ ವಿದ್ಯಾಭ್ಯಾಸದ ಖರ್ಚನ್ನು ನಿರ್ವಹಿಸಲು ಅಸಹಾಯಕರಾಗಿದ್ದಾರೆ. ಈ ವಿದ್ಯಾರ್ಥಿಯು 10 ನೇ ತರಗತಿ ಓದುತ್ತಿದ್ದು ಶಾಲಾ ಶುಲ್ಕ (ಫೀಸ್) ತುಂಬಲು ಅವಶ್ಯವಿದ್ದ ಹಣವನ್ನು ನಮ್ಮ ಪ್ರಯತ್ನ ತಂಡದಿಂದ ಭರಿಸಲಾಗಿದೆ. ನಮ್ಮ ಈ ಹೊಸ ಪ್ರಯತ್ನದೊಂದಿಗೆ, ಬಡತನ ಈ ಮಗುವಿನ ಓದಿಗೆ ಅಡ್ಡಿಯಾಗದಿರಲಿ ಎಂದು ಓದಿನಲ್ಲಿ ಆಸಕ್ತಿ ಹೊಂದಿರುವ ಈ ಮಗುವಿನ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಿ ಅವನ ಬಾಳಿಗೆ ದಾರಿದೀಪವಾದ ಖುಷಿ ನಮ್ಮಲ್ಲಿದೆ. ಇದೆಲ್ಲವೂ ಸಾಧ್ಯವಾಗಿರುವುದು ನಿಮ್ಮೆಲ್ಲರ ಸಹಾಯ ಮತ್ತು ಪ್ರೋತ್ಸಾಹದಿಂದ. An effort to enlighten the life of a poor student. Here is a student from a poor family whose father is facing health problems and unable to work hard to afford the school fees of his child. The student is studying in 10th standard, as a support to his education, our Prtyatna team decided to pay his school fees. Our endeavor to support the student who is interested to learn would create a bright future in the coming days. It is possible because of the support and encouragement of people like you. #Prayatna #PrayatnawithMadhu #Project10
ಹೊಸ ರೂಪದೊಂದಿಗೆ ಹಳೆಯ ಗೂಡು. ಫಲಿಸಿತು ಮಹಿಳೆಯ ಆಶಯ
01:30

ಹೊಸ ರೂಪದೊಂದಿಗೆ ಹಳೆಯ ಗೂಡು. ಫಲಿಸಿತು ಮಹಿಳೆಯ ಆಶಯ

ಹಳೆಯ ಗೂಡಿಗೆ ಹೊಸ ರೂಪ ನೀಡುವ ಪ್ರಯತ್ನ ಯೋಜನೆಯ ಮೊದಲನೇ ಹಂತದಲ್ಲಿ ಅಸಹಾಯಕ ಮಹಿಳೆಯ 25 ವರ್ಷದ ಹಳೆಯ ಮನೆಗೆ ಪ್ಲಾಸ್ಟರ್ ಮಾಡುವ ಕೆಲಸವೂ ನಿಮ್ಮೆಲ್ಲರ ಬೆಂಬಲದಿಂದ ಪರಿಪೂರ್ಣಗೊಂಡಿದೆ. ನಿಮ್ಮ ಈ ಸಹಾಯ ಹಸ್ತಕ್ಕೆ ಮುಗ್ದ ಮಹಿಳೆ ಹಾಗೂ ನಮ್ಮ ತಂಡವು ಸದಾ ಕೃತಜ್ಞರಾಗಿರುತ್ತೇವೆ. ಈ ಯೋಜನೆಯ ಎರಡನೇ ಹಂತದಲ್ಲಿ ಆ ಮನೆಯ ನೆಲಕ್ಕೆ ಟೈಲ್ಸ್ ಹಾಕಬೇಕೆಂದು ತೀರ್ಮಾನಿಸಿದ್ದೇವೆ. ಮಹಿಳೆ ಮತ್ತು ಅವರ ಚಿಕ್ಕ ಮಕ್ಕಳಿಗೆ ವಾಸಿಸಲು ವ್ಯವಸ್ಥಿತವಾದ ಮನೆಯನ್ನು ನಿರ್ಮಿಸಿ ಕೊಡುವುದು ನಮ್ಮ ತಂಡದ ಉದ್ದೇಶವಾಗಿದೆ. ಮುಂದಿನ ಹಂತಗಳಲ್ಲಿ ಆ ಮನೆಯನ್ನು ನವೀಕರಿಸಲು ಮತ್ತಷ್ಟು ಯೋಜನೆಗಳನ್ನು ನಿಮ್ಮ ಮುಂದೆ ನಾವು ಪ್ರಸ್ತುತ ಪಡಿಸುತ್ತೇವೆ. ಈ ಪ್ರಯತ್ನಕ್ಕೆ ಎಂದಿನಂತೆ ನಿಮ್ಮೆಲ್ಲರ ಬೆಂಬಲ ಹಾಗೂ ಪ್ರೋತ್ಸಾಹವೂ ನಮ್ಮ ಜೊತೆ ಇರಲಿ ಎಂದು ವಿನಂತಿಸಿಕೊಳ್ಳುತ್ತೇವೆ. ಈ ಉತ್ತಮ ಉದ್ದೇಶಕ್ಕಾಗಿ ನಮ್ಮನ್ನು ಬೆಂಬಲಿಸಲು ಮತ್ತು ಪ್ರೋತ್ಸಾಹಿಸಲು ನಾವು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8494945327 / 7353767637. A few days ago Prayatna team initiated the renovation of the house of a poor woman whose husband was a drunkard and passed away 3 months ago. In the first phase, we have completed the plastering work of the house. In the second phase, we have decided to complete the flooring work, we intend to provide better shelter for this needy woman. We thank all the supporters who extended their helping hand in this noble cause. To complete this renovation project and to provide a more organized house for a woman we will take further steps in the coming days. We urge all of you to support and encourage us in this initiative. For more information please contact us at 8494945327 / 7353767637 #Prayatna #Prayatnawithmadhu #Project8
"ಕುಂಬಾರಿಕೇ ಕಲೆಗೆ ಜೀವ ಕಳೆ ಬೇಕಿದೆ,  ಕಣ್ಮರೆಯಾಗುತ್ತಿರುವ ಮಡಿಕೆಗಳ ಮರುಬಳಕೆ ಹೆಚ್ಚಿಸುವ ಪ್ರಯತ್ನ"
02:43

"ಕುಂಬಾರಿಕೇ ಕಲೆಗೆ ಜೀವ ಕಳೆ ಬೇಕಿದೆ, ಕಣ್ಮರೆಯಾಗುತ್ತಿರುವ ಮಡಿಕೆಗಳ ಮರುಬಳಕೆ ಹೆಚ್ಚಿಸುವ ಪ್ರಯತ್ನ"

ಕುಂಬಾರಿಕೆ ಕಲೆಗೆ ಜೀವ ಕಳೆ ಬೇಕಿದೆ, ಕಣ್ಮರೆಯಾಗುತ್ತಿರುವ ಮಡಿಕೆಗಳ ಮರುಬಳಕೆ ಹೆಚ್ಚಿಸುವ ಪ್ರಯತ್ನ" ಕುಲಕಸುಬಾದ ಕುಂಬಾರಿಕೆಯು ನಶಿಸಿ ಹೋಗುತ್ತಿರುವ ಈ ಕಾಲದಲ್ಲಿ ಇಲ್ಲೊಂದು ಕುಟುಂಬ ಕಳೆದ 40 ವರ್ಷಗಳಿಂದ ಕುಂಬಾರಿಕೆಯ ಕಲೆಯನ್ನು ಬೆಳಸಿ ಉಳಿಸುತ್ತಿದೆ. 75 ವರ್ಷ ಮೇಲ್ಪಟ್ಟ ಬಡಕುಟುಂಬದ ಹಿರಿಯರೊಬ್ಬರು ಕುಂಬಾರಿಕೆಯ ವೃತ್ತಿಯನ್ನು ನಡೆಸುವ ಮುಖಾಂತರ ಕಲೆಯನ್ನು ಉಳಿಸುವುದರ ಜೊತೆಗೆ ತಮ್ಮ ಹೊಟ್ಟೆಪಾಡನ್ನು ನೀಗಿಸಿಕೊಳ್ಳುತ್ತಿದ್ದಾರೆ. ನಿಂತುಕೊಂಡು ಕೆಲಸ ಮಾಡುವಷ್ಟು ಶಕ್ತಿಯು ಇವರಿಗಿಲ್ಲ, ಇವರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಮಗ ಆಟೋರಿಕ್ಷಾ ನಡೆಸುವುದನ್ನು ಬಿಟ್ಟು ತಂದೆಗೆ ಸಹಾಯ ಮಾಡುತ್ತಿದ್ದಾರೆ. ಬಡ ಜೀವನ ನಡೆಸುತ್ತಿರುವ ಈ ಕುಟುಂಬವು ಕಲೆಯನ್ನು ಉಳಿಸುದಕ್ಕೆ ಶ್ರಮವಹಿಸಿ ಕಷ್ಟ ಪಡುತ್ತಿದ್ದಾರೆ. ಹಿರಿಯ ಜೀವಕ್ಕೆ ಈ ವೃತ್ತಿಯನ್ನು ನಡೆಸಲು ವಿದ್ಯುತ್ ಚಾಲಿತ ಕುಂಬಾರಿಕೆ ಯಂತ್ರವು ಅವಶ್ಯವಾಗಿದೆ. ನಮ್ಮ ಪ್ರಯತ್ನ ತಂಡದಿಂದ ಇವರಿಗೆ ಆ ಯಂತ್ರವನ್ನು ನೀಡಲು ನಿರ್ಧರಿಸಿದ್ದೇವೆ. ಶ್ರಮಕ್ಕೆ ತಕ್ಕ ಪ್ರತಿಫಲ ಒದಗಿಸಿ, ಪ್ರಾಚೀನ ಕಾಲದ ಕಲೆಯನ್ನು ಮುನ್ನಡೆಸಲು ಇವರಿಗೆ ನಾವೆಲ್ಲರೂ ಸಹಾಯದ ಹಸ್ತ ನೀಡೋಣ. ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಎಂದಿನಂತೆ ಇರಲಿ ಎಂದು ವಿನಂತಿಸಿಕೊಳ್ಳುತ್ತೇವೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8494945327 / 7353767637 #Project9 #Prayatnawithmadhu #Prayatna Pottery needs a life, an attempt to promote the disappearing pots. In this modern era, traditional pottery is endangered. Here is a family that has been cultivating and promoting pottery for the past 40 years. A 75-year-old elderly person has been promoting the tradition along with earning their daily bread by running a pottery business. His son quit his autorickshaw driving to help his father in this profession. This poor family is working hard to save the pottery profession. An electric-powered pottery machine is required for the elderly person to continue this profession. So, we decided to support him. Let us all extend our helping hands to provide the pot-making machine to them. Prayatna team urges you for your support the needy potter. Contact 8494945327/ 7353767637 for more information
Yutube_Channel
Anchor 1

Active project video's

Active_project
Completed_Project

Completed project video's